Saturday, 26 October 2019

ಓ ಮಾನವ .......
ಯಾಕೀಗೆ ಗೋಳಾಡುತ್ತಿ..????
ಜಾತಿ ಜಾತಿ ಜಾತಿ ಎಂದು ಯಾಕಿಂಗೆ ಹಾರಡುತ್ತಿ...????
ಹುಟ್ಟುವಾಗ ನೀ ಬಂದೆ ಬೆತ್ತಲೆ,
ಸಾಯುವಾಗ ನೀ ಹೋಗುವೆ ಬೆತ್ತಲೆ..
ಬದುಕಿರುವ ನಾಲ್ಕು ದಿವಸ
ಮಾಡಬೇಡ ನಿನ್ನ ಬಾಳು ಕತ್ತಲೆ ...


ಉಂಡ ಮನೆಗೆ ಎಂದು ದ್ರೋಹ ಬಗೆಯ ಬೇಡ
ಜಾತಿ ಜಾತಿ ಜಾತಿ ಎಂದು ಕೊರಗಿ ಸಾಯಬೇಡ
ಇಂದು ನಿನ್ನ ಸಂಗಡ ಜಾತಿ ಎಂದು ಹಾರಡುವ ಜನರು
ನಾಳೆ ನಿನ್ನ ಸಾವಿಗು ಸಹ ಬರದೆ ಇರುವರು,
ಎಂಬ ಸತ್ಯವನ್ನು ಎಂದಿಗು ಮಾತ್ರ ಮರೆಯಬೇಡ....


ಮಾನವ ದೇಹದಲ್ಲಿ ಹರಿಯುವ ರಕ್ತವಾಗಲಿ
ನಾವು ದಿನನಿತ್ಯ ಸೇವಿಸುವ ಆಹಾರವಾಗಲಿ
ಯಾವುದೇ ಜಾತಿ ಭೇದವಿಲ್ಲದೆ ಇರುವಾಗ
ನೀನ್ಯಾಕೆ ಜಾತಿ ಎಂದು ವಿಷ ಬೀಜವ ಬಿತ್ತುತ್ತಿ...???


ನೀ ಎಷ್ಟೆ ಡೊಡ್ಡ ಮನುಷ್ಯಾನಾದರು
ಊರಿಗೆ ನೀನೆ ಯುಗಪುರುಷನಾದರು
ಸತ್ತ ಘಳಿಗೆಯಲ್ಲೆ ನಿನ್ನ‌ ಹೇಸರ ಮರೆತು
ನಿನ್ನನ್ನು ಹೆಣ ಎಂದು ಕರೆಯುವರು
ಎಂಬ ಸತ್ಯವ ಮರೆಯಬೇಡ....


ಪ್ರಪಂಚದಲ್ಲಿ ಎಷ್ಟು ದಿವಸ ಇರುವಿ ನಿ‌ ಬಲ್ಲೆ
ಇನ್ನೊಂದು ಜನುಮದಲ್ಲಿ ಎನಾಗಿ ಹುಟ್ಟುವಿ ನಿ ಬಲ್ಲೆ
ಜಾತಿ ಮತ ಬಿಟ್ಟು ಬದುಕಲು ಕಲಿತರೆ
ಇರುವಷ್ಟು ದಿನ ಸಂತೊಸದಿ ನಿ ಜೀವಿಸಬಲ್ಲೆ
ಎಂಬ ಸತ್ಯವ ಅರಿತು ಬದುಕು ನೀ ಮಾನವ..


:- ಸುರೇಶ್ ಸಲ್ಡಾನ್ಹಾ, ಸಕಲೇಶಪುರ

0 comments:

Post a Comment

Post A Comment