Wednesday, 16 August 2017

ಹುಂಜಾಟ.......
ಓಂದೆ ರೀತಿಯಲ್ಲಿ
ಓಂದೆ ಕುಲದಲ್ಲಿ
ಓಂದೆ ನೆಲದಲ್ಲಿ
ಆವರು ಹುಟ್ಟಿದರು....


ಓಂದೆ ಗೂಡಿನಲ್ಲಿ ಇದ್ದು
ಓಂದೆ ತಟ್ಟೆಯಲ್ಲಿ ಉಂಡು
ಓಂದೆ ಲೋಟದಲ್ಲಿ ಕುಡಿದು
ಓಂದೆ ತಾಯಿಯ ಆಸರೆಯಲ್ಲಿ ಬೆಳೆದರು


ಗಿರಾಕಿಗಳು ಬಂದರು ಅಸ್ತರಲ್ಲಿ
ಓಬ್ಬರನೊಬ್ಬರು ಆರಿಸಿ ಕೊಂಡು
ಹೋದರು ಆಡಿಸಲು ಸಂತೆಯಲ್ಲಿ
ಸಂತಶ ಪಡಲು ತಮ್ಮ ಜೂಜಿನಲ್ಲಿ


ಊರಿನವರಿಗೆ ಮನರಂಜನೆಯಾ ಆಟ
ಹುಂಜಾಂದಿರಿಗೆ ಇಲ್ಲಿ ಪ್ರಾಣಸಂಕಟ
ಯಾರ ಸಂತೋಶಕ್ಕೆ ಯಾರು ಆಡುವುದು..
ಯಾರ ಕಿಸೆಯಲ್ಲಿ ಯಾರ ಹಣ ಹೋಗುವುದು...


ಬೆಳೆದಿದ್ದವು ಓಂದೆ ಗೂಡಿನಲ್ಲಿ
ಹೋರಬಂದಿದ್ದವು ಓಂದೆ ಕಾವಿನಲ್ಲಿ
ಯಾರ ಸಂತಶಕ್ಕೆ ಆಡಿಡ ಜಗಳದಲ್ಲಿ
ಸತ್ತು ಬಿದ್ದವು ನಡು ಸಂತೆಯಲ್ಲಿ....


ಹುಂಜಾಕ್ಕೆ ಏನು ಆರಿಯದು..
ಆದರೆ ಜನರಿಗೆ ಯಾಕೆ ಇನ್ನು ತಿಳಿಯದು..?
ಹುಂಜಾಂದಿರು ಕಚ್ಚಾಡಿ ಸತ್ತವು
ಇಲ್ಲಿ ಜನರು ಓಬ್ಬರನೊಬ್ಬರು ಕಚ್ಚಾಡಿದರು...


ಯಾರಿಗಾಗಿ ಯಾರು ಹೋಡೆಡಾಡಿದರು
ಯಾರಿಗಾಗಿ ಯಾರೊ ಜೀವ ಹಣಿದರು
ಯಾರ್ಯಾರ ಮನೆಯ ದೀಪ ಆರಿತು
ಯಾರ್ಯಾರ ಮಕ್ಕಳು ಆನಾಥರಾದರು


ಓಂದೆ ಊರಿನಲ್ಲಿ ಬೆಳೆದವರು
ಓಂದೆ ಶಾಲೆಯಲ್ಲಿ ಕಲಿತವರು
ಓಂದೆ ಭಾವಿಯ ನೀರ ಕುಡಿದವರು
ಇಂದು ಇನ್ಯಾವರಿಗಾಗಿ ಕಿಚ್ಚಾಡಿದರು


:- ಸುರೇಶ್ ಸಲ್ಡಾನ್ಹಾ, ಪನ್ವೆಲ್, ಅಭುದಾಬಿ.




1 comments:

Post A Comment