Wednesday, 16 August 2017

ಓ ಯುವತಿಯೆ..
ಮನಸ್ಸೆಂಬ ದೇಗುಲದಲ್ಲಿ
ಪ್ರೀತಿಯೆಂಬ ದೇವತೆಯ
ಕಾಯುತಿರುವಾಗ
ಮನೆ ಮುಂದಿನ
ಭಾಲ್ಕನಿಯಲ್ಲಿ
ಮುಸ್ಸಂಜೆಯ
ಪ್ರಶಾಂತಾತೆಯಲ್ಲಿ
ಗಾಳಿಯಲ್ಲಿ
ಕೇಶರಾಶಿಯ
ನಿ ಹರಿಯ ಬಿಟ್ಟಾಗ
ನಿನ್ನ ನಾ ಕಂಡೆ 
ಅಪ್ಸರೆಯ 
ಊರ್ವಶ್ರಿಯ
ಮೇನಕೆಯ
ರೂಪದಲ್ಲಿ..


ಅಗಷ್ಟೆ ಮಿಂದು 
ಬಂದ ನಿನ್ನ
ದೇಹದಿಂದ ಬರುತ್ತಿದ್ದ
ಅ ಸುಂದರ 
ಸುವಾಸನೆಯು
ನನ್ನ ದೇಹದ 
ರೋಮ ರೋಮವ
ಬೆರೆತಾಗ
ಅಯಸ್ಕಾಂತದ ಹಾಗೆ
ನನ್ನ ಮನಸ್ಸು
ನಿನ್ನ ಸನಿಹ ಸೆಳೆಯಿತು

ಅಗ ನಿನ್ನ ಸುಂದರ
ನಗೆಯ ನೋಡಿದಾಗ
ನಿನ್ನ ಸೌಂದರ್ಯವ
ಬಣ್ಣಿಸಲು
ನಿನ್ನ ಯೌವನವ
ವರ್ಣಿಸಲು
ಕವಿತೆಯ ಅರಿಯದ
ಮನಸ್ಸಲ್ಲಿ
ಕವಿತೆಯ ಮಳೆಯೆ
ಸುರಿಯಿತು.
ಸುರೇಶ್ ಸಲ್ಡಾನ, ಸಕಲೇಶಪುರ.


1 comments:

Post A Comment