ಭಾರತದ ಪಿತಾಮಹರಾದ ನಿಮಗೆ ವಂದನೆ
ಪೋರಬಂದರಿನ ಶ್ರೀಮಂತ ಕುಟುಂಬದಲ್ಲಿ ಜನಿಸಿ
ಲಂಡನಿನಲ್ಲಿ ಕಾನುನಿನ ವಿದ್ಯಾಬ್ಯಾಸವ ಮುಗಿಸಿ
ದೇಶದ ಸ್ವಾಂತಂತ್ರಕ್ಕಾಗಿ ತಮ್ಮನ್ನೆ ಸಮರ್ಪಿಸಿ
ಭಾರತ ದೇಶದ ಪಿತಾಮಹನಾದ ನಿಮಗೆ ವಂದನೆ
ನಮ್ಮ ದೇಶವು ಬ್ರಿಟಿಷರ ದಬ್ಬಾಳಿಕೆಯಲ್ಲಿದ್ದಾಗ
ಸಹಿಸಲಾದಿರಿ ನಮ್ಮವರು ಕಷ್ಟದಲ್ಲಿದ್ದಾಗ
ದೇಶಕ್ಕಾಗಿ ತಮ್ಮ ಎಲ್ಲಾ ಶ್ರೀಮಂತಿಕೆಯನ್ನು ತ್ಯಜಿಶಿ
ಬ್ರಿಟಿಷರ ಕ್ಯೆಯಿಂದ ದೇಶವನ್ನು ಮುಕ್ತಗೊಳಿಸಿದ ನಿಮಗೆ ನಮನ
ಬ್ರಿಟಿಷರ ಕ್ರೂರತನಕ್ಕೆ ಬಗ್ಗದೆ ,
ಅವರ ಬಂದನಕ್ಕೆ ಅಂಜದೆ,
ಉಪಹಾಸ ಸತ್ಯಾಗ್ರಹವನ್ನು ಕ್ಯೆ ಬಿಡದೆ
ಆಹಿಂಸಾ ತತ್ವವನ್ನು ಮರೆಯದೆ
ಭಾರತ ದೇಶಕ್ಕೆ ಸ್ವತಂತ್ರವ ತಂದು ಕೊಟ್ಟ ನಿಮಗೆ ವಂದನೆ.
ಶ್ರೀಮಂತಿಕೆಯ ಉಡುಪನ್ನು ಬಿಟ್ಟು,
ಖಾದಿ ಬಟ್ಟೆಯ ತೊಟ್ಟು...
ಚರಕದಿಂದ ಉಡುಪನ್ನು ಹೊಳೆದು
ಬಡವರಿಗೆ ಉದ್ಯೊಗವಕಾಶವನ್ನು ಕಲ್ಪಿಸಿ
ಕೋಪ , ಮತ್ಸರ, ಹಗೆತನವ ಮರೆದು
ನಮ್ಮೆಲ್ಲರ ಪಿತಾಮಹರಾದ ನಿಮಗೆ ನಮನ....
ದ್ರುಷ್ಟರ ಕಣ್ಣು ನಿಮ್ಮ ಮೇಲೆ ಬಿದ್ದಾಗ
ಗುಂಡಿನ ಏಟಿಗೆ ನೀವು ಬಲಿಯಾದಾಗ
ಇಡಿ ದೇಶವೇ ನಿಮಗಾಗಿ ರೊದಿಸಿತು
ಭಾರತದ ರತ್ನವೆ ಕರಗಿ ನೀರಾಯಿತು
ಅಂದಿನ ನಿಮ್ಮ ಒಂದು ಉತ್ತಮ ನಿರ್ದಾರದಲ್ಲಿ
ನಾವಿಂದು ಬದುಕಿರುವೆವು ಸುಖಶಾಂತಿಯಲ್ಲಿ
ನಿಮ್ಮ ಸಹಾನು ಬೂತಿ ಪ್ರೀತಿ ಪ್ರೇಮದಲ್ಲಿ
ತುಂಬಿರುವೆವು ನಾಂವಿಂದು ಸಂತೊಸದಲ್ಲಿ....
;- ಸುರೇಶ್ ಸಲ್ಡಾನ್ಹಾ, ಸಕಲೇಶಪುರ
0 comments:
Post a Comment
Post A Comment