ಬಾಲ್ಯವೆ ನಿ ಮತ್ತೊಮ್ಮೆ ಬಾ
ಯಾರಿಗೆಲ್ಲ ನೆನಪುಂಟು....
ಬಾಲ್ಯದಲ್ಲಿ
ಮರವನ್ನು ಹತ್ತಿ
ಮರಕೋತಿ ಆಡಿದ್ದು....
ನೇರಳೆ ಮರವ ಹತ್ತಿ
ನೇರಳೆ ಹಣ್ಣ ತಿಂದದ್ದು
ಸೀಬೆ ಕಾಯಿಯ ಕೊಯ್ಯುವಾಗ
ಮರದಿಂದ ಜಾರಿ ಬಿದ್ದದ್ದು
ಗೇರು ಹಣ್ಣ ತಿಂದು
ಬೀಜವನ್ನು ಸುಟ್ಟಿ ತಿಂದದ್ದು
ಬಾಲ್ಯದ ಜೀವನ ಜೀವನವೆ
ಎಷ್ಟು ಕಾಸ ಕೊಟ್ಟರು ಸಿಗದು
ಎಷ್ಟು ಕಾದು ಕುಳಿತರು ಬರದು
ಮರೆವೆ ಎಂದರು ಮರೆಯದು...
ಬಾಲ್ಯವೆ ನಿ ಮತ್ತೊಮ್ಮೆ ಬಾ
ಆ ನಮ್ಮ ನೆನಪುಗಳನ್ನು ಮರುಕಳಿಸಲು
ಅಮ್ಮನ ಕ್ಯೆಯ ತುತ್ತ ಸವಿಯಲು
ಬಾಲ್ಯವೆ ನಿ ಮೊಗದೊಮ್ಮೆ ಬಾ....
:- ಸುರೇಶ್ ಸಲ್ಡಾನ, ಪನ್ವೆಲ್
0 comments:
Post a Comment
Post A Comment