Wednesday, 31 July 2019

ನಿನ್ನ ನಡತೆ

ಹೃದಯದಲ್ಲಿ ಪ್ರೀತಿಯೇ ತುಂಬಿದ್ದರೆ
ವೈರಿಗಳೂ ಪ್ರೇಮಿಗಳಾಗುತ್ತಾರೆ. 
ಮನದಲ್ಲಿ ದ್ವೇಷವೇ ತುಂಬಿದ್ದರೆ
ಪ್ರೇಮಿಗಳೂ ವೈರಿಯಾಗುತ್ತಾರೆ. 

ಐ ಲವ್ ಯು ಎಂದರೆ ಸಾಲದು
ಪ್ರೀತಿಯನ್ನು ನಿನ್ನ ನಡೆ ನುಡಿಯಲ್ಲಿ ತೋರಿಸು
ಬಿಚ್ ಪಾರ್ಕ್ ಸುತ್ತಿದರೆ ಸಾಲದು
ಅವರ ಮನದಾಳವನ್ನು ತಿಳಿಯಲು ಪ್ರಯತ್ನಿಸು

ದಿನವಿಡಿ ಚಾಟಿಂಗ್, ಕಾಲಿಂಗ್ ಮಾಡಿದರೆ ಸಾಲದು
ಅಗತ್ಯವಿರುವಾಗ ಅವರೊಂದಿಗೆ ಇದ್ದು ತೋರಿಸು
ಪ್ರೀತಿ , ಪ್ರೇಮ ಎಂದು ಐಸ್ ಕ್ರಿಮ್ ತಿಂದರೆ ಸಾಲದು
ನಿನ್ನ ನಡತೆಯನ್ನು ಐಸ್ ಕ್ರಿಮ್ ನಂತೆ ಕರಗಲು ಪ್ರಯತ್ನಿಸು

:- ಸುರೇಶ್ ಸಲ್ಡಾನ, ಸಕಲೇಶಪುರ, ಅಭುಧಾಬಿ.



0 comments:

Post a Comment

Post A Comment