Tuesday, 7 November 2017

ಓ ಮಾನವ...
ಬಾಳೆಂಬ ಭುತ್ತಿಯಲ್ಲಿ
ನೋವಿದೆ - ನಲಿವಿದೆ
ಸಂತೋಷವಿದೆ - ಬೇಸರವಿದೆ
ನಗುವಿದೆ - ಅಳುವಿದೆ
ಬಡತನವಿದೆ - ಸಿರಿತನವಿದೆ
ಕೋಪವಿದೆ- ಆಹಂಕಾರವಿದೆ
ಮತ್ಸರವಿದೆ- ಕನಿಕರವಿದೆ...

ಅದಕ್ಕಾಗಿ
ನೋವಿಗೆ ಅಂಜದೆ
ನಲಿವಿಗೆ ಕುಣಿದಾಡದೆ
ಸಂತೋಷಕ್ಕೆ ಮಣಿಯದೆ
ಬೇಸರಕ್ಕೆ ತಲೆಬಾಗದೆ
ಬಡತನಕ್ಕೆ ಬಲಿಯಾಗದೆ
ಸಿರಿತನಕ್ಕೆ ಹಿಗ್ಗದೆ

ಜೀವನದ ಒಂದೊಂದು 
ಘಳಿಗೆಯನ್ನು
ಹಾಳುಮಾಡದೆ...
ಬಾಳಿನ ಸವಿಯನ್ನು 
ಸವಿಯುತ್ತಾ..
ಯಾರ ದಬ್ಬಳಿಕೆಗು
ಅಂಜದೆ
ಯಾರ ಮಾತಿಗೂ
ಕಿವಿಗೊಡದೆ...
ಯಾರನ್ನು ನಂಬಿ 
ಬದುಕದೆ..
ಸದಾ ಹಸನ್ಮುಖಿಯಾಗಿರು
ಓ ಮಾನವನೆ....

ಸುರೇಶ್ ಸಲ್ಡಾನ, ಪನ್ವೆಲ್ .


0 comments:

Post a Comment

Post A Comment