Sunday, 12 November 2017

ಕಾಯುತಿರುವೆ ನಿ ಬರುವಿಯೆಂದು....
ಮುಂಜಾನೆಯ ಮುಸುಕಿನಲಿ
ತಂಪಾದ ಗಾಳಿಯಲ್ಲಿ
ಹಕ್ಕಿಗಳ ಹಾಡಿನಲ್ಲಿ
ನಿ ಬಂದೆ ಸಿಹಿಯಾದ ಕನಸಿನಲ್ಲಿ


ಶ್ರುಬ್ರವಾದ ಮನಸಿನಲ್ಲಿ
ದೇಹದ ರಗ್ತಕಣದಲ್ಲಿ
ಸೇವಿಸುವ ಗಾಳಿಯಲ್ಲಿ
ನಿ ಸೇರಿರುವೆ ನನ್ನ ಹ್ರದಾಯಾಳಾದಲ್ಲಿ


ಸಿಹಿಯಾದ ಮುತ್ತಿನಲ್ಲಿ
ಬೆಚ್ಚನೆಯ ಅಪ್ಪುಗೆಯಲ್ಲಿ
ಬಿಗಿಡಾದ ತೋಳಿನಲ್ಲಿ
ನಿ ಮಲಗಿದೆ ನನ್ನ ಮಡಿಲಿನಲ್ಲಿ


ಬದಾಲಾಯಿತು ಕನಸು ನನಸಿನಲ್ಲಿ
ಒಂದಾದೆವು ಆಕಸ್ಮಿಕದ ಮಿಲನದಲ್ಲಿ
ಮುಳುಗಿದೆವು ಪ್ರೀತಿ ಪ್ರೇಮದಲ್ಲಿ
ಹಾಡಿ ಕುಣಿದೆವು ಸಂತೋಷದಲ್ಲಿ


ದಿನಕಳೆದಂತೆ ಮಾತು ಕಡಿಮೆಯಾಯಿತು
ಕಳಿಸಿದ ವಾರ್ತೆಗೆ ಉತ್ತರ ಬರದಾಯಿತು
ಹಗಳಿಲಿರು ಎನ್ನದೆ ಕಾಯಬೇಕಾಯಿತು
ಕನಸಿನ ಗೋಪುರ ಕುಸಿದು ಹೋಯಿತು...


ನಾವು ಅಂದುಕೊಂಡಗೆ ನಡೆಯಲಿಲ್ಲ
ಯೋಚನೆಯಿಂದ ರಾತ್ರಿಯಿಡಿ ನಿದ್ದೆ ಬರಲಿಲ್ಲ
ಮನದಲ್ಲಿ ನೆಮ್ಮದಿಯಿಲ್ಲ,ಸಹನೆಗೆ ನನ್ನ ಮಿತಿಯಿಲ್ಲ
ಕಾದು ಕಾದು ಸಾಕಾದರು ನಿನ್ನ ಸುಳಿವಿಲ್ಲ.........


ಕಾಯುತಿರುವೆ ನಿ ಬರುವಿಯೆಂದು
ಮುತ್ತಿನ ಸುರಿಮಳೆಯಲ್ಲಿ ತುಂಬಿವಿಯೆಂದು
ನನ್ನೊಂದಿಗೆ ಸಂಸಾರವ ಮಾಡುವಿಯೆಂದು
ನಮ್ಮ ಪ್ರೀತಿಯನ್ನು ಮುಗಿಲಿಗೆ ಮುಟ್ಟಿಸುವೆಯೆಂದು.


ಬರೆದವರು : ಸುರೇಶ್ ಸಲ್ಡಾನ್ಹಾ. ಅಬುದಾಬಿ


0 comments:

Post a Comment

Post A Comment