ಕರುಣಾಮಹಿ ದಯಾಸಾಗರನೇ....
ನಿನ್ನ ದರುಶನಕ್ಕೆಂದು
ನಾ ಬಂದೆ ನಿನ್ನ ಸನಿಯಕ್ಕೆ
ಆಲಿಸು ನನ್ನ ಕರೆಯಾ
ಪಾಲಿಸು ನನ್ನ ಕೋರಿಕೆಯಾ
ನಿನ್ನ ವಚನವ ಆಲಿಸಿ
ನಿನ್ನ ನುಡಿಯ ಪಾಲಿಸಿ
ನಿನ್ನ ಮಾರ್ಗದಂತೆ ನಡೆಯಲು
ಕರುಣಿಸು ನನಗೆ ಶಕ್ತಿಯಾ
ಕರುಣಾಮಹಿ ದೇವನೆ
ಆಲಿಸೆಮ್ಮ ಪ್ರಾರ್ಥನೆ
ಪಾಪಿಗಳ ವಿಮೋಶಕನೆ
ಒರೆಸೆಮ್ಮ ಕಣ್ಣೀರ ವೇದನೆ
ಕಲ್ವಾರಿಯ ಬೆಟ್ಟದಿ
ರಕ್ತದ ಬೆವರನ್ನು ಸುರಿಸಿದ
ದೇವರ ಕುರಿಮರಿಯೆ
ಆಲಿಸೆಮ್ಮ ಯಾತನೆ
ಮಾರಣಾಂತಿಕ ರೋಗದಲ್ಲಿ
ನರಳುತಿರುವ ನಮ್ಮೆಲ್ಲರನ್ನು
ನಮ್ಮೆಲ್ಲ ಕಷ್ಟ ಸಂಕಷ್ಟಗಳನ್ನು
ನಿವಾರಿಸು ಒ ದಯಾಸಾಗರನೆ
ಊಟ, ನಿದ್ರೆ, ಅಸರೆ ಇಲ್ಲದೆ
ದುಃಖದಿಂದ ಬರಲುತಿರುವ
ಎಲ್ಲಾರಲ್ಲಿ ತೋರು ನಿ ಕರುಣೆಯ
ನೀಡಿ ಅನುಗ್ರಹಿಸು ಸುಖ ಶಾಂತಿಯ
ನಿನ್ನ ವಚನವ ಸದಾ ಆಲಿಸಲು
ನಿನ್ನಿಂದ ಎಂದು ದೂರವಾಗದಿರಲು
ನಿನ್ನ ವಾಕ್ಯವ ಹಾಡಿ ಕೊಂಡಾದಲು
ಶಕ್ತಿಯ ನಮಗೆ ಕರುಣಿಸು ಒ ತಂದೆಯೆ..
ಸ್ವರ್ಗ ಭುವಿಯನ್ನು ರಚಿಸಿದ ಸ್ರಷ್ಡಿಕರ್ತನೆ
ನಮ್ಮ ಮೇಲೆ ಕರುಣೆಯ ತೋರಿರಿ
ಇಡಿ ಲೋಕವೆ ಕತ್ತಲೆಯಲ್ಲಿರುವಾಗ
ಸದಾ ದ್ಯೆರ್ಯ್ಯಾ ತುಂಬುವ ದೀಪವಾಗಿರಿ.
ರಚನೆ : ಸುರೇಶ್ ಸಲ್ಡಾನ್ಹಾ, ಸಕಲೇಶ್ಪುರ
0 comments:
Post a Comment
Post A Comment