Sunday, 14 July 2019


ಫಾತಿಮಾ ಮರಿಯಮ್ಮ.....

ಅಮ್ಮಾ ಫಾತಿಮಾ ಮರಿಯಮ್ಮ
ಕರುಣೆಯ ನಮಗೆ ತೋರಮ್ಮ
ವರವನು ನಮಗೆ ನೀಡಮ್ಮ
ಶಾಂತಿಯ ನಮಗೆ ಕರುಣಿಸಮ್ಮ‌

ನೋರಾರು ಕುಟುಂಬದ ನಾಯಕಿಯೇ
ಬಡವರ ದಲಿತರ ಪೋಷಕಿಯೇ
ನಮ್ಮೆಲ್ಲರ ಪ್ರೀತಿಯ ಓಡತಿಯೆ
ಸ್ವರ್ಗಲೋಕದ  ರಾಣಿಯೆ....

ಅಮ್ಮಾ ಫಾತಿಮಾ ಮರಿಯಮ್ಮ
ಕರುಣೆಯ ನಮಗೆ ತೋರಮ್ಮ
ವರವನು ನಮಗೆ ನೀಡಮ್ಮ
ಶಾಂತಿಯ ನಮಗೆ ಕರುಣಿಸಮ್ಮ‌

ನಿಮ್ಮನ್ನೆ ನಂಬಿ ಬಂದಿರುವ
ನಿಮ್ಮ ಮಕ್ಕಳ ಪ್ರಾರ್ಥನೆಯ ಆಲಿಸಮ್ಮ
ನಿಮ್ಮ ಸನ್ನಿದಿಯಲ್ಲಿ ನೆಲಿಸಿರುವ
ನಮ್ಮೆಲ್ಲರನ್ನು ಸಾಕಿ ಸಲಾವಮ್ಮ

ಅಮ್ಮಾ ಫಾತಿಮಾ ಮರಿಯಮ್ಮ
ಕರುಣೆಯ ನಮಗೆ ತೋರಮ್ಮ
ವರವನು ನಮಗೆ ನೀಡಮ್ಮ
ಶಾಂತಿಯ ನಮಗೆ ಕರುಣಿಸಮ್ಮ‌

:- ಸುರೇಶ್ ಸಲ್ಡಾನ್ಹಾ, ಫಾತಿಮಾಪುರ

( 13.05.1999 ರಂದು ಫಾತಿಮಾ ಮಾತೆಯ ಹಬ್ಬದಂದು, ನನ್ನ ಮೊದಲ ದ್ಯೆವಿಕ ಗೀತೆಯನ್ನು , ನಿರ್ಗಮನ ಗೀತೆಯಾಗಿ ಹಾಡಲಾಯಿತು. ಫಾತಿಮಾ ಮಾತೆಯ ಆಶಿರ್ವಾದ ಸದಾ ನಮ್ಮಲ್ಲಿ ಇರಲಿ ಎಂದು ಬೇಡುತ್ತೆನೆ.)



0 comments:

Post a Comment

Post A Comment